Monday, March 23, 2009

ಹರಿಹರಪುರ ದುರ್ಗಾ ಪರಮೇಶ್ವರಿ ಉಡಿಸಲಮ್ಮ ನವರ ಜಾತ್ರೆ

ನಮ್ಮ ಊರಿನ ಜಾತ್ರೆ ಬಗ್ಗೆ ನನಗೆ ಆಸಕ್ತಿ ಹೆಚ್ಚಿರಲು ಕಾರಣವಿದೆ. ನಮ್ಮೂರಿಗೆ ಸೇರಿದ ಏಳು ಹಳ್ಳಿಗಳಲ್ಲಿ ಒಟ್ಟು ೧೫-೨೦ ಸಾವಿರ ಜನರು ಇರಬಹುದು. ಜಾತ್ರೆ ದಿನ ನಮ್ಮ ಏಳೂ ಹಳ್ಳಿಯ ಜನ ಒಟ್ಟಾಗಿ ನಮ್ಮೂರಲ್ಲಿ ಸೇರ್ತಾರಲ್ಲಾ! ಅಷ್ಟೇ ಅಲ್ಲಾ, ಎಲ್ಲರ ಮನೆಗೆ ನೆಂಟರಿಷ್ಟರು. ಬಹುಷ: ನೆಂಟರಿಷ್ಟರೇ ೮-೧೦ ಸಾವಿರ ಜನರಿರಬಹುದು. ಇನ್ನು ಯಾರಿಗೂ ನೆಂಟರೂ ಆಗಿರದೆ ಕೇವಲ ದೇವರ ಸೇವೆಗೆಂದು ಬಂದ ಭಕ್ತರೂ ಇರ್ತಾರೆ. ಎಲ್ಲರೂ ಆ ಎರಡು ದಿನಗಳು ಅನಂದವಾಗಿ, ಊರ ಹಬ್ಬ ಆಚರಿಸುತ್ತಾರೆ. ಇದಕ್ಕಿಂತ ಇನ್ನೇನು ಬೇಕು? ಆ ದಿನಗಳಲ್ಲಿ ಹಳ್ಳಿಗರ ಸಂಬ್ರಮ ನೋಡಲು ಎರಡು ಕಣ್ಣುಗಳು ಸಾಲದು. ಹಳ್ಳಿಗಳಲ್ಲಿ ಭಾವನೆಗಳು ಬತ್ತಿಲ್ಲ.


ದೇವಿ ಉಡಿಸಲಮ್ಮ ನವರ ಕೆಂಡ-ಕೊಂಡ ಜಾತ್ರೆ ಯಲ್ಲಿ ಕೆಂಡ ಹರಡುತ್ತಿರುವ ದೃಶ್ಯ
ಹರಿಹರಪುರ
ದುರ್ಗಾ ಪರಮೇಶ್ವರಿ ಉಡಿಸಲಮ್ಮ ನವರ ಜಾತ್ರೆಹರಿಹರಪುರ ದುರ್ಗಾ ಪರಮೇಶ್ವರಿ ಉಡಿಸಲಮ್ಮ ನವರ ಜಾತ್ರೆ ಯಲ್ಲಿ ನಾದಸ್ವರ ತಂಡ.

No comments: