Thursday, March 5, 2009

ದುರ್ಗಾ ಪರಮೇಶ್ವರಿಯ ಪುಷ್ಪಾಲಂಕೃತ ಮೂಲ ವಿಗ್ರಹ


ಪುಷ್ಪಾಲಂಕೃತ ದೇವಿ ಉಡಿಸಲಮ್ಮ-ದುರ್ಗಾಪರಮೇಶ್ವರಿದೇವಿಗೆ ಕುಂಕುಮಾರ್ಚನೆ ಮಾಡಿದಾಗತೇರಿನ ಒಂದು ದೃಶ್ಯ[ಈ ರೀತಿಯ ಮೂರು ತೇರುಗಳು ಈ ಜಾತ್ರೆಅ ವೈಶಿಷ್ಠ್ಯ]


ಸಿಡಿಯಾಡುವ ಈರ ಮಕ್ಕಳು
ದೇವಿಯ ಉತ್ಸವ
ಸಿಡಿ-ಒಂದು ದೃಶ್ಯ

ಕೆಂಡ ಹಾಯುವ ದೃಶ್ಯ
ಮರದ ಮೇಲೆ ಕುಳಿತು ಜಾತ್ರೆ ನೋಡಿದರು
ಹರಿಹರಪುರ ಜಾತ್ರೆಯಲ್ಲಿ ಮೂರು ತೇರುಗಳಿರುತ್ತವೆ.ಅದರಲ್ಲಿ ಒಂದರ ಚಿತ್ರ.
ಬಾಯಿಬೀಗ ಚಿಚ್ಚುತ್ತಿರುವ ದೃಶ್ಯ


ಬಾಯಿಬೀಗ ಸೇವೆ.ಇದು ಒಂದು ಮನೆತನದಲ್ಲಿ ನಡೆದುಬಂದಿರುವ ಸೇವೆ


ಹರಿಹರಪುರದ ಮಾಧವ ಕೃಷ್ಣನ ಸುಂದರ ಮೂರ್ತಿ
ದೇವಾಲಯದ ಮುಂದೆ ದಗದಗಿಸುವ ಕೆಂಡದ ರಾಶಿ.
ದೇವಿಯ ಉತ್ಸವ ಮೂರ್ತಿ
ಶಿಲೆಯ ಮೇಲೆ ಮೂಡಿರುವ ದೇವಿಯ ಮೂಲ ವಿಗ್ರಹ

ಹಾಸನ ಜಿಲ್ಲೆಯ ಹೊಳೇನರಸೀಪುರ ತಾಲ್ಲೂಕಿನ ಹರಿಹರಪುರ ಗ್ರಾಮದ ದೇವಿ ಉಡುಸಲಮ್ಮ ದುರ್ಗಾಪರಮೇಶ್ವರಿಯ ಬಗ್ಗೆ ಒಂದಿಷ್ಟು ಮಾಹಿತಿಗಳನ್ನು ಈ ಹಿಂದೆ ಸಂಪದದಲ್ಲಿ ಬರೆದಿದ್ದೆ. ಮೊನ್ನೆ ಹರಿಹರಪುರಕ್ಕೆ ಹೋಗಿದ್ದಾಗ ದೇವಿಯ ಮುಂದೆ ಹತ್ತಿರದಲ್ಲಿ ಕುಳಿತು ಪಂಚಾಮೃತಾಭಿಶೇಕ, ಕುಂಕುಮಾರ್ಚನೆ, ಮಂಗಳಾರತಿಯನ್ನು ನೋಡಿ ಆನಂದಿಸಿದ್ದೇನೆ. ಏರ್ ಫೋರ್ಸ್ ನ ನಿವೃತ್ತ ಅಧಿಕಾರಿಶೇಷಾದ್ರಿ ಅವರ ಪತ್ನಿಯೊಡನೆ ಬೆಂಗಳೂರಿನಿಂದ ಬಂದಿದ್ದರು.ಅವರ ಪತ್ನಿ ರತ್ನ ಅವರ ಬಾಯಲ್ಲಿ ದೇವಿಯ ಮಹಿಮೆ ಬಗ್ಗೆ ಕೇಳಿದರೆ ಅವರು ಹೇಳುತ್ತಾ ಹೇಳುತ್ತಾ ಕಣ್ಣಲ್ಲಿ ನೀರುತುಂಬಿಕೊಳ್ಳುತ್ತಾರೆ. ಅವರ ಜೀವನದಲ್ಲಿ ಎಲ್ಲಾ ಉನ್ನತಿಗೂ ದೇವಿಯಕೃಪೆಯೇ ಕಾರಣವೆಂದು ಅವರ ದೃಢ ನಂಬಿಕೆ.ಶೇಷಾದ್ರಿ ಯವರು ಡಿಪ್ಲೊಮೊ ಮಾಡಿ ಟೆಕ್ನೀಶಿಯನ್ ಆಗಿ ಏರ್ ಫೋರ್ಸ್ ಸೇರಿದ್ದರಂತೆ. ನಂತರ ಏ.ಎಮ್.ಐ,ಇ ಮಾಡಿದ ಮೇಲೆ ಒಂದು ಉನ್ನತ ಹುದ್ಧೆಗೆ ನಡೆದ ಇಂಟರ್ ವ್ಯೂನಲ್ಲಿ ೧೦೪ ಅಭ್ಯರ್ಥಿಗಳಲ್ಲಿ ನಾಲ್ವರು ಆಯ್ಕೆಯಾಗುವಾಗ ಇವರಿಗೆ ಅದೊಂದು ಪವಾಡ ವೆಂದು ಹೇಳುತ್ತಾರೆ.ಕಾರಣ ಇವರಿಗಿಂತ ಅರ್ಹತೆ ಜಾಸ್ತಿ ಇರುವ ಅಭ್ಯರ್ಥಿಗಳಿದ್ದರೂ ಇವರಿಗೆ ಆ ಹುದ್ಧೆ ದಕ್ಕಿದ್ದು ದೇವಿಯ ಕೃಪೆಯೇ ಸರಿ ಎನ್ನುತ್ತಾರೆ. ಇವರ ಇಬ್ಬರು ಮಕ್ಕಳು ಅಮೇರಿಕಾದಲ್ಲಿ ಸಾಫ್ಟ್ ವೇರ್ ಇಂಜಿನಿಯರುಗಳು. ಮನೆಮಂದಿಗೆಲ್ಲಾ ದೇವಿಯ ಮೇಲೆ ಅಗಾಧ ವಿಶ್ವಾಸ. ಅವರಿಂದ ಕೇಳಿದ್ದನ್ನು ಸಂಕೊಚವಿಲ್ಲದೆ ಹೇಳಬೇಕಾದ್ದು ನನ್ನ ಧರ್ಮ. ಅಂತೂ ದೇವಿಯನ್ನು ನಂಬಿರುವ ಸಾವಿರಾರುಭಕ್ತರಿಗೆ ದೇವಿಯ ಜಾತ್ರೆ ನೋಡುವಾಸೆ. ಇದೇ ಮಾರ್ಚ್ ೨೧ ನೇ ತಾರೀಕು ಶನಿವಾರ ಕೆಂಡ ಕೆಂಡೋತ್ಸವ, ಸಿಡಿಯಾಟ, ತೇರು, ಚೋಮನ ಕುಣಿತ, ಉತ್ಸವ,ಎಲ್ಲವೂ ಸಂಬ್ರಮದಿಂದ ನಡೆಯಿತು
ಇದೊಂದು ಜಾನಪದ ಸೊಬಗು. ಭಕ್ತಿಯಮೆರಗು.ಹಳ್ಳಿಜನರಿಗೆ ಊರ ಹಬ್ಬ.ಹರಿಹರಪುರಕ್ಕೆ ಸೇರಿದ ಏಳುಹಳ್ಳಿಗಳ ಜನರಊರಹಬ್ಬ. ಮೂರು ಹಳ್ಳಿಗಳಿಂದ ಎಳೆದು ತರುವ ತೇರುಗಳು, ಏಳು ಬಂಡಿಗಳು, ಅವುಗಳ ಜೊತೆಗೂಡಿ ಬರುವ ಭಕ್ತಜನಸಾಗರ.
ಹರಿಹರಪುರ ತಲುಪುವುದು ಹೇಗೆ?
೧]ಬೆಂಗಳೂರಿನಿಂದ ಮದ್ಯಾಹ್ನ ೨.೦೦ ಗಂಟೆಗೆ ಹೊರಡುವ ಬೆಂಗಳೂರು-ಗೊರೂರು ಸರ್ಕಾರಿ ಬಸ್ ಹರಿಹರಪುರವನ್ನು ಸಂಜೆ ೭.೦೦ ಗಂಟೆಗೆ ಸೇರುತ್ತೆ.
೨] ಹೊಳೇನರಸೀಪುರಕ್ಕೆ ಎಮ್ಟು ಕಿಲೋಮೀಟರ್ ದೂರ. ಸಾಕಷ್ಟು ಬಸ್ಸುಗಳು, ಟೆಂಪೋಗಳು ಲಭ್ಯ
೩] ಹಾಸನದಿಂದ ೩೦ ಕಿಲೋಮೀಟರ್ ದೂರ. ಹೆಚ್ಚು ಸೌಕರ್ಯ ಬಯಸುವವರು ಹಾಸನದಲ್ಲಿ ತಂಗಿದ್ದು ಬೆಳಿಗ್ಗೆ ಸ್ನಾನ ಮುಗಿಸಿ ೭.೦೦ ಗಂಟೆಗೆ ಹಾಸನ ಬಿಟ್ಟರೂ ಸಕಾಲಕ್ಕೆ ಹರಿಹರಪುರ ತಲುಪ ಬಹುದು. ಹಾಸನದಿಂದ ಹೊಳೇನರಸೀಪುರ ಹೆದ್ದಾರಿಯಲ್ಲಿ ಹೊರಟಾಗ ಹಳೇಕೋಟೆ ಎಂಬಊರು ದಾಟುತ್ತಿರುವಾಗ ಎಡಕ್ಕೆ ಮಾವಿನಕೆರೆ ರಂಗನಾಥನ ಬೆಟ್ಟ ಕಾಣುತ್ತೆ.ಅದರ ಪಕ್ಕದಲ್ಲಿ ಅಂದರೆ ಹೆದ್ದಾರಿಯಿಂದ ಎಡಕ್ಕೆ ತಿರುಗಿದರೆ ಅದೂ ಒಂದು ಹೆದ್ದಾರಿಯೇ. ಅದು ದೇವೇಗೌಡರ ಹುಟ್ಟೂರಾದ ಹರದನಹಳ್ಳಿ ಮಾರ್ಗವಾಗಿ ಹರಿಹರಪುರ ತಲಪುತ್ತೆ.
ಸಿಡಿಜಾತ್ರೆ, ದೇವಿಯ ಮತ್ತು ಕೆಂಡಕೊಂಡ ಚಿತ್ರಗಳನ್ನು ಕೆಳಗಿನ ಕೊಂಡಿಯಲ್ಲಿ ನೋಡಬಹುದು.
-------------------------------------------------------------------------------------------
ದೃಶ್ಯಾವಳೀ
೧] ಬಾಯಿಬೀಗ ಸೇವೆ.ಇದು ಒಂದು ಮನೆತನದಲ್ಲಿ ನಡೆದುಬಂದಿರುವ ಸೇವೆ
೨] ಹರಿಹರಪುರದ ಮಾಧವ ಕೃಷ್ಣನ ಸುಂದರ ಮೂರ್ತಿ
೩] ದೇವಾಲಯದ ಮುಂದೆ ದಗದಗಿಸುವ ಕೆಂಡದ ರಾಶಿ.
೪]ದೇವಿಯ ಉತ್ಸವ ಮೂರ್ತಿ
೫] ಶಿಲೆಯ ಮೇಲೆ ಮೂಡಿರುವ ದೇವಿಯ ಮೂಲ ವಿಗ್ರಹ

No comments: