Wednesday, March 4, 2009

ಕವಿಗಳೇ, ಬರುವಿರಾ ನೀವು?

ಅಪ್ಪ ಹಾಕಿದ್ದ ಆ ಮರದ ನೆರಳಲ್ಲಿ

ಅದೆಷ್ಟು ಹಾಯಾಗಿ ಮಲಗಿದ್ದೆ ನಾನು!

ಹಣ್ಣು ಕಾಯ್ಗಳ ತಿಂದು

ಚಿಲಿಪಿಲಿ ಗುಟ್ಟುತ್ತಾ

ನಲಿವ ಹಕ್ಕಿಗಳನ್ನು ಮರೆಯಲೇನು?

ಚೈತ್ರದಾ ಆಚಿಗುರು

ಘಮಘಮಿಸುವಾ ಹೂವು

ರುಚಿ ರುಚಿಯಾ ಹಣ್ಣು

ಇನ್ನು ಸಿಗುವುದೇನು?

ಚೈತ್ರಬಂದರೂ ಇಂದು

ಚಿಗುರಲೊಲ್ಲದು ಏಕೋ

ಮತ್ತೆಲ್ಲಿ ಹೊವಿನಾ ಘಮ?

ಇನ್ನೆಲ್ಲಿ ರುಚಿ ರುಚಿಯಾ ಹಣ್ಣು?

ಎಲುಬುದೇಹವ ಕಂಡು

ಒದ್ದೆಯಾಗಿದೆ ಕಣ್ಣು|

ಬುಡದಲ್ಲಿ ಬೆಳೆದಿದೆಯಲ್ಲಾ

ಮಹಮ್ಮಾರಿ ಕಳೆ!

ಪೈಪೋಟಿ ಮಾಡಿದೆಯಲ್ಲಾ

ತಿಂದು ಅದೇ ಮರದ ಎಲೆ|

ಕಳೆಯ ತೆಗೆಯಬೇಕು

ಮರವ ಉಳಿಸಬೇಕು

ಕವಿಗಳೇ, ಬರುವಿರಾ ನೀವು?

No comments: