-ಸ್ವಾಮೀಜಿ, ದೇವರನ್ನು ನೋಡಲು ಸಾಧ್ಯವೇ?
-ಓಹೋ ಸಾಧ್ಯ.
-ಹೇಗೆ, ಸ್ವಾಮೀಜಿ?
-ಮಗು ತನ್ನ ಅಮ್ಮನನ್ನು ಹೇಗೆ ಕರೆಯುತ್ತೆ, ಹಾಗೆ ಕರೆದರೆ ಭಗವಂತನು ದರ್ಶನ ಕೊಡ್ತಾನೆ.
-ಸ್ವಲ್ಪ ವಿವರವಾಗಿ ಹೇಳಿ ಸ್ವಾಮೀಜಿ.
-ಮಗುವು ತನ್ನ ಅಮ್ಮನನ್ನು ಕರೆಯುವಾಗ ತನ್ನ ಅಮ್ಮ ನ ಬಗ್ಗೆ ಸಂಶಯ ತಾಳಿರುತ್ತಾ?
-ಇಲ್ಲಾ.
-ಸಂಕೋಚ ಪಡುತ್ತಾ?
-ಇಲ್ಲಾ.
-ನಾಚಿಕೆಪಡುತ್ತಾ?
-ಇಲ್ಲಾ.
-ಭಯ ಪಡುತ್ತಾ?
-ಇಲ್ಲಾ.
-ಗಾಬರಿಯಾಗುತ್ತಾ?
-ಇಲ್ಲಾ.
-ಮಗುವಿಗೆ ತನ್ನ ಅಮ್ಮನ ಬಗ್ಗೆ ಎಷ್ಟು ಹಂಬಲ ಇರುತ್ತೆ?
-ಅಸಾಧ್ಯವಾದ ಹಂಬಲ ಇರುತ್ತೆ.
-ದೇವರನ್ನು ನಾವು ಕಾಣಬೇಕೂ ಅಂದ್ರೆ ಮಗುವಿಗೆ ತನ್ನ ತಾಯಿಯ ಬಗ್ಗೆ ಅಚಲವಾದ ನಂಬಿಕೆ , ಹಂಬಲ,ಪ್ರೀತಿ, ಇರುವಂತೆ ನಮಗೆ ದೇವರ ಬಗ್ಗೆ ಇರಬೇಕು.ಅಮ್ಮನನ್ನು ಮಗು ಕರೆದಾಗ ಹೇಗೆ ತಾಯಿಯು ಮಗುವಿನ ಕರೆಗೆ ಓಗೊಟ್ಟು ಅದರ ಬೇಡಿಕೆಯನ್ನು ಈಡೇರಿಸುತ್ತಾಳೋ ಹಾಗೆಯೇ ದೇವರೂ ಕೂಡ ನಮ್ಮ ಕರೆಗೆ ಓಗೊಟ್ಟು ನಮ್ಮ ಬೇಡಿಕೆಯನ್ನು ಈ ಡೇರಿಸುತ್ತಾನೆ. ಆದರೆ ನಮ್ಮ ಬೇಡಿಕೆಯ ಸ್ವರೂಪ ಹೇಗಿರಬೇಕು? ಮಗುವು ಹೊಟ್ಟೆ ಹಸಿದಾಗ ಹಾಲುಣಿಸಲು ಅಮ್ಮನಿಗಾಗಿ ಅಳುತ್ತದೆಯೇ ಹೊರತು ಬೇರೆ ಯಾವುದೋ ಅಮ್ಮನಿಂದ ದೊರೆಯದ ವಸ್ತುವಿಗಾಗಿ ಅಲ್ಲ, ಅದರ ಬೇಡಿಕೆ ಅರ್ಥಪೂರ್ಣ ವಾಗಿದೆ, ಸಮಂಜಸವಾಗಿದೆ, ಆದ್ದರಿಂದ ಅಮ್ಮ ಕೂಡಲೇ ಪೂರೈಸಿ ಬಿಡುತ್ತಾಳೆ, ಹಾಗೆಯೇ ನಿರ್ಮಲಭಾವದಿಂದ,ದೃಢ ವಾದ ನಂಬಿಕೆಯಿಂದ ,ಪ್ರೀತಿಯಿಂದ, ಅತ್ಯಂತ ಹಂಬಲದಿಂದ ,ಅತ್ಯಂತ ವಿನಯದಿಂದ, ಅಹಂಕಾರ ರಹಿತನಾಗಿ, ವಿನಮ್ರವಾಗಿ , ಆ ದಯಾಮಯನಾದ ಭಗವಂತನನ್ನು ನಾವು ಪ್ರಾರ್ಥಿಸಿದ್ದೇ ಆದರೆ , ಆ ಭಗವಂತನು ದರ್ಶನವನ್ನೂ ಕೊಡುತ್ತಾನೆ, ನಿನ್ನ ಬೇಡಿಕೆಯನ್ನೂ ಈಡೇರಿಸುತ್ತಾನೆ.
ಹಾಗಾದರೆ ನಿನ್ನ ಬೇಡಿಕೆ ಹೇಗಿರಬೇಕು? ನನ್ನನ್ನು ಪ್ರಧಾನಮಂತ್ರಿ ಮಾಡೆಂದರೆ ಕೂಡಲೇ ಮಾಡಿಬಿಡುತ್ತಾನೆಯೇ? ಇದು ಎಲ್ಲರೂ ಕೇಳುವ ಪ್ರಶ್ನೆಯೇ?
" ಭಗವಂತಾ, ನನ್ನಲ್ಲಿರುವ ಅಹಂಕಾರವನ್ನು ದೂರಮಾಡು, ದುರಾಸೆ ಕೊಡಬೇಡ, ನಿನ್ನಲ್ಲಿ ದೃಢವಾದ ನಂಬಿಕೆಬರುವಂತೆ ಮಾಡು, ಹೀಗೆ ಅತ್ಯಂತ ಹಂಬಲದಿಂದ ಆ ಭಗವಂತನಲ್ಲಿ ಪ್ರಾರ್ಥನೆ ಮಾಡಿ ,ಅವನಲ್ಲಿ ವಿಶ್ವಾಸವಿಟ್ಟು ನಿರಂತರ ಅವನ ಧ್ಯಾನದಲ್ಲಿ ನಿರತರಾಗಿ, ಕ್ರಮೇಣ ನಿಮ್ಮ ಜೀವನದಲ್ಲಿ ಆಗುವ ಮಾರ್ಪಾಡು ನೋಡಿ, ಅಂದರೆ ಮಗುವಾಗಿದ್ದಾಗ ನಮ್ಮಲ್ಲಿದ್ದಂತಹ ನಿಷ್ಕಲ್ಮಶ ಹೃದಯವು ನಾವು ದೊಡ್ದವರಾದನ್ತೆಲ್ಲಾ ಮಾಯವಾಗಿ ಕೇವಲ ಕಪಟ ಜೀವನ ಮಾಡುತ್ತಾ ದೇವರನ್ನು ಕಾಣ ಬಹುದೇ ಎಂದರೆ ಅವನು ಸಿಗಲಾರ. ಆದ್ದರಿಂದ ಮತ್ತೊಮ್ಮೆ ನಾವು ಮಗುತ್ವದೆಡೆಗೆ ಮರಳುವ ಯತ್ನ ಮಾಡಿದರೆ ನಾವು ಭಗವಂತನನ್ನು ಖಂಡಿತವಾಗಿ ಕಾಣಬಲ್ಲೆವು.

No comments:
Post a Comment