Monday, October 6, 2008

ಯೇಗ್ದಾಗ್ ಎಲ್ಲಾ ಐತೆ

"ಯೇಗ್ದಾಗ್ ಎಲ್ಲಾ ಐತೆ "

ಮುಕುಂದೂರ್ ಸ್ವಾಮಿಗಳ ಬಗ್ಗೆ ಬೆಳೆಗೆರೆ ಕೃಷ್ಣ ಶಾಸ್ತ್ರಿಗಳು ಬರೆದಿರುವ ಪುಟ್ಟ ಪುಸ್ತಕ " ಯೇಗ್ದಾಗೆ ಎಲ್ಲಾ ಐತೆ " ಓದುತ್ತಿದ್ದರೆ ಮೈ ರೋಮಾಂಚನ ವಾಗುತ್ತೆ. ಯಾರೋ ಏನೋ ಕಟ್ಟಿ ಕತೆ ಹೇಳಿದ್ರೆ ಅದನ್ನು ನಂಬಲಿಕ್ಕಾಗುವುದಿಲ್ಲ. ಅನುಭವಿಸಿ ಬರೆದರೆ , ಅದೂ ಬರೆದವರು ಬದುಕಿದ್ದಾಗಲೇ ಆ ಪುಸ್ತಕ ಓದಿದರೆ , ಸಂದೇಹ ವಿದ್ದರೆ ಪರಿಹರಿಸಿಕೊಂಡು ಬಿಡಬಹುದು ಕೂಡ.

ಪುಸ್ತಕದಲ್ಲಿನ ಗ್ರಾಮೀಣ ಭಾಷೆ , ಸರಳ ನೇರ ನುಡಿಗಳು ನನ್ನನ್ನು ಹೆಚ್ಚು ಆಕರ್ಷಿಸಿತು. ಒಂದು ನಾಲ್ಕು ಸಾಲು ಬರೆಯೋಣ ಅನ್ನಿಸ್ತಿದೆ.

"ಸಾವ್ಕಾರನ್ತಾವ ದುಡ್ಡಿರೋದು, ಸನ್ಯಾಸಿತಾವ ಸಿದ್ಧಿ ಇರೋದು ಎಲ್ಡೂ ಒಂದೇ ಕಣ್ ಮಗಾ . ಅವ್ನಿಗೂ ಹಾಂಕಾರ ಬಿಟ್ಟಿಲ್ಲ, ಇವನಿಗೂ ಬಿಟ್ಟಿಲ್ಲ.

" ಏಸಾದರೂ ಖರ್ಚಾಗಲೀ ಇವ್ನ ಮನೆತನ ನಿರ್ನಾಮ ಮಾಡ್ತೀನಿ ಅಂತಾನೆ ಸಾವ್ಕಾರ, ಒಂದು ಬಿರುಗಣ್ಣು ಬಿಟ್ಟು ನಿನ್ನ ಸುಟ್ಟು ಬಿಡ್ತೀನಿ ಅಂತಾನೆ ಸನ್ಯಾಸಿ. ಇಬ್ರಿಗೂ ಗರಾ [ಅಹಂಕಾರ]ಬಿಟ್ಟಿಲ್ಲ. ಗರಾ ಬಿಟ್ರೇನೆ ಗುರು ನೋಡಪ್ಪಾ "

-ಅಬ್ಭಾ! ಎಂತಾ ನೇರ ನುಡಿ!! ಸ್ವಾಮೀಜಿ ಮಾತು ಸನ್ಯಾಸೀನೂ ಬಿಡಲಿಲ್ಲ, ಸಾವ್ಕಾರನ್ನೂ ಬಿಡಲಿಲ್ಲಾ."ಅವದೂತ " ಅಂದ್ರೆ ಇನ್ತೋರೇ ಆಲ್ವಾ?

ಯಾರಿನ್ದೇನಾಗ್ಬೇಕು?

ಕಣ್ ಮುಂದೆ ಸತ್ಯ ಅಷ್ಟೆ. ಪ್ರಕೃತಿ ಜೊತೆ, ಭಗವಂತನ ಜೊತೆ, ಗಿಡ ಮರ ಬಳ್ಳಿಗಳ ಜೊತೆ ಸ್ವಾಮೀಜಿ ಮುಗ್ಧವಾಗಿ ಆಡೋ ಮಾತನ್ನು ಕೇಳ್ತಾ ಇದ್ರೆ , ನಮ್ಮಲ್ಲಿ ತುಂಬಿಕೊಂಡಿರೋ " ನಾನು" ವಿನ ಬಗ್ಗೆ ನಾಚುವನ್ತಾಗುತ್ತದೆ.

ಇವತ್ತು ಇಷ್ಟು ಸಾಕು, ರಾತ್ರಿ ನಮ್ಮ ಸತ್ಸಂಗದ ಜೊತೆ ಪಳಿನಿ,ನೆರೂರ್ [ ಸದಾಶಿವ ಬ್ರಹ್ಮೇಂದ್ರ ಸರಸ್ವತಿ ಗಳ ವೇದಿಕೆ] ಎಲ್ಲಾ ನೋಡಿಕೊಂಡು ೪-೫ ದಿನ ಬಿಟ್ಟು ವಾಪಸಾಗ್ತೀವಿ, ಬಂದಮೇಲೆ ಮತ್ತೆ ಬರೀತೀನಿ.

No comments: