Sunday, September 21, 2008

ಸರ್ವೇ ಭವಂತು ಸುಖಿನ:
ಸರ್ವೇ ಸಂತು ನಿರಾಮಯಾ:
ಸರ್ವೇ ಭದ್ರಾಣಿ ಪಶ್ಯಂತು
ಮಾ ಕಶ್ಚಿತ್ ದು:ಖ ಭಾಗ್ಭವೇತ್

ನಮ್ಮ ಋಷಿ ಮುನಿಗಳ ನಿತ್ಯದ ಪ್ರಾರ್ಥನೆ ಇದೇ ಆಗಿತ್ತು . ಕೇವಲ ನಾನು ಮಾತ್ರ ಸುಖ ವಾಗಿರಬೇಕೆಂಬುದು ಅವರ ವಿಚಾರವಾಗಿರಲೇ ಇಲ್ಲ. ಇಡೀ ವಿಶ್ವವೇ ಸುಖವಾಗಿರಬೇಕು,ಎಲ್ಲರೂ ಆನಂದವಾಗಿರಬೇಕು,ಯಾರಿಗೂ ದು:ಖ ಬರುವುದು ಬೇಡ.

ಕಾಲೇ ವರ್ಷತು ಪರ್ಜನ್ಯ:
ಪೃಥಿವೀ ಸಸ್ಯ ಶಾಲಿನೀ
ದೇಶೋಯಂ ಕ್ಷೋಭ ರಹಿತ:
ಸಜ್ಜನಾ ಸಂತು ನಿರ್ಭಯಾ:

ಕಾಲಕಾಲಕ್ಕೆ ಮಳೆಯಾಗಲಿ, ಪೃಥ್ವಿಯು ಸಸ್ಯಶಾಮಲೆ ಯಾಗಿರಲಿ, ದೇಶದಲ್ಲಿ ಕ್ಷೋಭೆ ಇಲ್ಲದಿರಲಿ.ಸಜ್ಜನರು ನಿರ್ಭಯದಿಂದ ಇರುವಂತಾಗಲಿ.
ನಮ್ಮ ಋಷಿಮುನಿಗಳ ಚಿಂತನೆ ಹೇಗಿತ್ತು! ಎಷ್ಟು ವಿಶಾಲವಾದ ಚಿಂತನೆ!!

No comments: