ಗುಡಿಗೆ ತಂದ ಹೂಗಳೆಲ್ಲ
ಪೂಜೆಗೆಂದು ರಾಶಿ ಇರಲು
ಶಿವನ ಮುಡಿಯ ಸೇರ್ವ ಒಂದು
ದಳವೇ ಧನ್ಯವು
ನದಿಯ ನೀರು ಹರಿಯುತಿರಲು
ಕೋಟಿ ಜನರ ತೃಷೆಯ ತಣಿಸೆ
ಶಿವನ ಪಾದ ತೊಳೆವ ನೀರ
ಹನಿಯೆ ಧನ್ಯವು
ಎಲ್ಲ ಕವನ ರಾಶಿಯಲ್ಲಿ
ಎನ್ನ ಕವನದೊಂದು ಪದವು
ನಿಮ್ಮ ಮನಕೆ ಮುದವ ನೀಡೆ
ನಾನೇ ಧನ್ಯನು
ನನ್ನ ಕವನ ಧನ್ಯವು
soundaryalahari
15 years ago

No comments:
Post a Comment