Monday, September 22, 2008

ನಿಲುಕದ ಸುಖ

ಕಾಣದಾ ಫಲಕಾಗಿ
ಕೈಚಾಚಿ ನಿಂತಿರುವೆ
ನಿಲುಕದಾ ಸುಖಕಾಗಿ
ಪರಿತಪಿಸುತಿರುವೆ

ಶಿವಕೊಟ್ಟ ಫಲವ
ಉಣಬಯಸದಾ ನೀನು
ನಿನ್ನ ಸತ್ವವ ಮರೆತು
ಕುಬ್ಜನಾಗಿರುವೆ


ಓ ಮನವೇ ನೀ ನೋಡು
ನಿನ್ನ ನಿಜರೂಪವಾ
ಸಂತಸದಿ ಅನುಭವಿಸು
ಶಿವಕೊಟ್ಟ ಫಲವ

ಬರಲಿಬಿಡು ನಾಳೆ ಹೇಗೋ ಇರಲಿ
ಎದುರಿಸುವ ಬಲವಿರಲಿ
ಬಿಡದೆ ಛಲದಿ

No comments: