Saturday, September 27, 2008

ಸ್ನೇಹಿತರೇ,
ಈ ಮಾತುಗಳನ್ನು ಬರೆಯುವಾಗ ದೆಹಲಿಯಲ್ಲಿ ಮತ್ತೆ ಸ್ಪೋಟವಾಗಿದೆ. ಎಲೆಕ್ಟ್ರಾನಿಕ್ ಅಂಗಡಿಯ ಮುಂದೆ ಆಗಿರುವುದರಿಂದ ಇದು ಬಾಂಬ್ ಸ್ಪೋಟವೋ ಅಥವಾ ಬೇರೆ ಸ್ಪೋಟವೋ ಇನ್ನೂ ಅನುಮಾನ ವಿದೆ.ಅಂತೂ ಜನರಿಗೆ ಭೀತಿ ತಪ್ಪಿದ್ದಲ್ಲ.ಯಾಕೆ ಹೀಗೆ? ಏನಾಗಿದೆ ನಮ್ಮ ದೇಶಕ್ಕೆ? ಸತ್ಯ ಯಾಕೆ ಹೊರಬರುತ್ತಿಲ್ಲ. ಒಬ್ಬ ಸಾಮಾನ್ಯ ನಾಗರೀಕ ನಾದರೋ ಚಿಂತಾ ಕ್ರಾಂತನಾಗಿದ್ದಾನೆ. ಇದಕ್ಕೆ ಪರಿಹಾರವೇ ಇಲ್ಲವೇ? ಯಾಕೆ ಸತ್ಯವನ್ನು ಮರೆಮಾಚುತಿದ್ದಾರೆ?ಹೀಗೆಯೇ ಮುಂದುವರೆದರೆ ನಮ್ಮ ದೇಶದ ಗತಿ ಏನು? ಬಾಂಬ್ ಸಿಡಿದಾಗಲೆಲ್ಲಾ ಅದಕ್ಕೆ ಕಾರಣ ರಾದವರು ಇಸ್ಲಾಂ ಭಯೋತ್ಪಾದಕ ಸಂಘಟನೆಗಳಿಗೆ ಸೇರಿದವರಾಗಿರುತ್ತಾರೆ. ಅದನ್ನು ರಾಜಾರೋಷವಾಗಿ ಆಸಂಘಟನೆಗಳೇ ಹೇಳಿಕೊಳ್ಳುತ್ತಿವೆ. ಇಷ್ಟಾದರೂ ನಮ್ಮ ಸರ್ಕಾರಕ್ಕೆ ಕಾರಣರಾದವರಮೇಲೆ ಕಟ್ಟುನಿಟ್ಟಿನಕ್ರಮ ತೆಗೆದುಕೊಳ್ಳಲು ಮೀನಾ ಮೇಷ ಎಣಿಸುತ್ತಿರುವುದಾದರೂ ಏಕೆ? ಎಲ್ಲೋ ಒಂದುಕಡೆ ಓಟಿನ ರಾಜಕಾರಣ. ಯಾವಾಗ ಇಂತಹ ಅಪವಾದಗಳಿಂದ ನಮ್ಮ ರಾಜಕೀಯ ಪಕ್ಷಗಳು ಹೊರಬರುವ ಸಾಹಸ ಮಾಡುತ್ತವೆ? ದೇಶದ ನಾಗರೀಕರ ಮನ:ಸ್ಥಿತಿ ಅಂತೂ ಇನ್ನೂ ವಿಷಮ. ಬಹುಪಾಲು ಸಭ್ಯ ನಾಗರೀಕರು ಎಂದು ಕರೆಸಿಕೊಳ್ಳುವವರು ಸದಾ ಟಿವಿ ಮುಂದೆ. ದಿನದ ೨೪ ಗಂಟೆಯ ಟಿವಿ ಕಾರ್ಯಕ್ರಮಗಳು ಬಹುಪಾಲು ಜನರನ್ನು ಸೋಮಾರಿಗಳನ್ನಾಗಿ ಮಾಡಿರುವ ಪರಿಣಾಮವೇ ಇಂದಿನ ಬಹುಪಾಲು ಸಮಸ್ಯೆಗಳಿಗೆ ಕಾರಣ ವಾಗಿದೆ. ಜನರನ್ನು ಜಾಗೃತಿ ಗೊಳಿಸುವವರು ಯಾರು? ದೇಶಭಕ್ತಿ ಎಂದರೆ ಭಾಷಣ ಕೇಳೋದು ಮಾತ್ರ ಅಲ್ಲಾ , ಅಲ್ಲವೇ? ಇಂದು ನಾವು ಹೀಗೆಯೇ ಸುಮ್ಮನಾದರೆ ಆ ಭಗವಂತನೂ ನಮ್ಮದೇಶವನ್ನು ಕಾಪಾಡಲಾರ.
ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ -ಅಂತಾ ಕೃಷ್ಣ ಹೇಳಿದ ಮಾತು ನಿಜಾ ಆಗುತ್ತಾ ಇಲ್ವಾ ಅಂತಾ -ಟಿವಿ ಮುಂದೆ ಮಾತನಾಡಿಕೊಳ್ಳುವ ಜನರೂ ಇದ್ದಾರೆ ಅಂದರೆ ನಂಬುವಿರಾ?
ಹರಿಹರಪುರಶ್ರೀಧರ್
ದಿನಾಂಕ :೨೭.೯.೨೦೦೮
ಎರಡು ತಿಂಗಳೊಳಗಾಗಿ ಮುಂಬೈ ನಗರ ಮತ್ತೊಮ್ಮೆ ಭಯೋತ್ಪಾದಕರ ದಾಳಿಗೊಳಗಾಗಿದೆ!ನೂರರು ಪ್ರಾಣಹಾನಿಯಾಗಿದೆ.
ಮಡಿದ ಅಮಾಯಕರಿಗೆ,ಯೋಧರಿಗೆ ಕಂಬನಿ ಸುರಿಸಬಹುದಷ್ಟೆ.
ಹರಿಹರಪುರಶ್ರೀಧರ್
೨೮.೧೧.೨೦೦೮

No comments: