Thursday, September 25, 2008

ಪ್ರೀತಿಯ ಮಿತ್ರರೇ ,
ಬ್ಲಾಗ್ ಅಂದ್ರೆ ಏನು ಅಂತಾ ನಿನ್ನೆಮೊನ್ನೆ ಇಂದ ತಾನೆ ಗೊತ್ತಾಗ್ತಾ ಇದೆ. ಇನ್ನೂ ಅರ್ಥ ಮಾಡಿಕೊಂಡು ಬರೀ ಬೇಕು , ಅಲ್ಪ ಸ್ವಲ್ಪ ಗೊತ್ತಾದಮೇಲೆ ನನ್ನ ವಿಚಾರ ಹರೀ ಬಿಡಬಹುದು .ಅಲ್ಲಿತನಕ ವ್ಯವಧಾನ ಇಲ್ಲ. ಅದಕ್ಕಾಗಿ ಏನೇನೋ ಪ್ರಯೋಗ ಮಾಡ್ತಾ ಇದ್ದೀನಿ. ಯಾರಾದರೂ ಈ ಬ್ಲಾಗ್ ಬಗ್ಗೆ ಸಾಮಾನ್ಯ ಜನರಿಗೆ ತಿಳಿಯುವಂತೆ ಬರೆದರೆ ನಾನು ಓದಿ ಅರ್ಥ ಮಾಡಿಕೊಂಡು ಬರವಣಿಗೆ ತಕ್ಕ ಮಟ್ಟಿಗೆ ಮಾಡಬಹುದು. ಸಮಾಜದಲ್ಲಿ ಸುಖ,ಸಮೃದ್ಧಿ ,ಸಮಾಧಾನ, ಇರಲು ಏನೆಲ್ಲಾ ಮಾಡಬೇಕು ,ಆ ಬಗೆಗೆ ಬರೀ ಬೇಕು. ಇದು ನನ್ನ ಆಸೆ. ನಿಜಕ್ಕೂ ಎಂತಾ ಭವ್ಯ ಸಂಸ್ಕೃತಿ ಇರುವಂತಾ ದೇಶ ದಲ್ಲಿ ನಮ್ಮ ಜನ್ಮ ಆಗಿದೆ, ಆಲ್ವಾ? ಇಡೀ ಪ್ರಪಂಚಕ್ಕೆ ಬದುಕುವ ರೀತಿ ಕಲಿಸಿಕೊಟ್ಟವರು ನಮ್ಮ ಪೂರ್ವಜರು ಆಲ್ವಾ? ನಮ್ಮ ಋಷಿ ಮುನಿಗಳು ಹಲವಾರು ವರ್ಷಗಳು ಅನ್ನ ನೀರು ಇಲ್ಲದೆ ತಪಸ್ಸು ಮಾಡಿದ ಪರಿಣಾಮವಾಗಿ ಒಂದು ಜೀವನ ಕ್ರಮವನ್ನು ಕಂಡು ಹಿಡಿದು ಇಡೀ ವಿಶ್ವಕ್ಕೆ ಮಾದರಿಯಾಗಿ ಬದುಕಿ ತೋರಿಸಿದ್ದಾರಲ್ವಾ? ಯಾವ ಸಂಸ್ಕೃತಿಯಲ್ಲಿ ತ್ಯಾಗ ಮತ್ತು ಯೋಗಗಳು ಪರಮೋಚ್ಚ ಸ್ಥಿತಿಯಲ್ಲಿತ್ತೋ ಅದೇ ಸಂಸ್ಕೃತಿನಾ ನಾವೀಗ ಅನುಸರಿಸುತ್ತಿರುವುದು ? ಅಂತಾ ಸಂದೇಹ ಬರುತ್ತೆ ಆಲ್ವಾ? ಯಾಕೆ ಹೀಗಾಯ್ತು?
ಈ ಬಗ್ಗೆ ಸ್ವಲ್ಪಾ ಯೋಚಿಸೋಣ .ಸಾತ್ ಕೊಡ್ತೀರಾ?
ನಿಮ್ಮವನೇ
ಹರಿಹರಪುರಶ್ರೀಧರ್,

No comments: