Saturday, January 3, 2009

ಈಗ ಬೇಡ ಬಿಡಿ

ನಾವಿರೋದೇ ನಿಮ್ಮ ಸೇವೆಗಾಗಿ
ನೀವು ಮೈಕಿನಲ್ಲಿ ಭಾಷಣ ಬಿಗಿಯೋ ಮುನ್ನ
ಸ್ಟೇಜಿನಲ್ಲಿ ಟೇಬಲ್ ಹಾಕಿ
ಬ್ಯಾನರ ಕಟ್ಟಿ, ಹಾರತುರಾಯಿ ರಡಿಮಾಡಿ
ಮೈಕಿನಲ್ಲಿ ಒಂಟುತ್ರಿ-ತ್ರಿ ಟು ಒನ್
ಹೇಳೋಕಾಗಿಯೇ ನಾವಿರೋದು ಬಿಡಿ||


ಮನೆ ಮನೇಗೆ ಹೋಗಿ ಕದತಟ್ಟಿ
ಕೈ ಮುಗಿದು ಚೀಟಿ ಕೊಟ್ಟು
ನೂರು ಜನ ಕರೆದ್ರೆ ಮೂರು ಜನ ಬರುಲ್ಲ ಅಂತ ಗೊತ್ತಿದ್ದೂ
ಅದನ್ನೇ ಪ್ರತಿ ಭಾರಿಯೂ ಮಾಡುವ
ನಮಗೆ ಅದರಲ್ಲೇ ತೃಪ್ತಿ, ಬಿಡಿ||

ಭಾಷಣ ಮಾಡೋ ನೀವ್ ಹೇಗಾದ್ರೂ ಇರಿ
ಅದು ನಿಮ್ ಖುಷಿ
ನಾವ್ ಮಾತ್ರ ಬಂದೋರ್ಗೆಲ್ಲಾ ಸಲಾಮ್ ಹೊಡೆದು
ಅವರ ಚಪ್ಲಿ ಕಾಯ್ಬೇಕು, ಇದು ನಮ್ಮ ಧರ್ಮ ಬಿಡಿ|

ಹಾ! ನೀವಿರೋದೇ ಉದ್ದುದ್ದ ಭಾಷಣ ಬಿಗಿಯೋಕೆ
ವೇದಿಕೆಯ ಮೇಲೆ -ನಾವೆಲ್ಲಾ ನಿಮ್ ಸೇವಕರು, ಅಂತ ಹೇಳೋಕೆ|
ಗೊತ್ತಾಯ್ತು, ಬಿಡಿ,
ಅದೇ ನಾವೆಲ್ಲಾ ಅವರ ಸೇವಕರು-
ನಿಮ್ಮನ್ನು ಬಿ‍ಟ್ಟು||

ನೀವ್ ಬಿಸಿ ಊಟ ಮಾಡಿ
ಉಳಿದಿದ್ದ ತಂಗಳು-ಪಂಗಳು
ಹಳ್ಸಿದ್ದು-ಕೆಟ್ಟಿದ್ದು
ಆಳಿಗೆ ಹಾಕೋ ವಿಚಾರ,
ಈಗ ಯಾಕೇ ಬಿಡಿ|

ನಿಮ್ಮ ಹನ್ನೆರಡು ವರ್ಷದ
ದಾಂಡಿಗ ಮಗನ ಪುಸ್ತಕದ ಹೊರೆಯನ್ನು
ಆ ಮುದ್ಕಾ ಹೊತ್ಕೊಂಡ್ ಬರ್ತಾನಲ್ಲ,
ಆ ವಿಚಾರ ಯಾರಿಗೂ ಹೇಳುಲ್ಲಾ, ಬಿಡಿ||

ಬೆಳಗಿನ ಜಾವ ಮೂರಕ್ಕೆ ಎದ್ದು
ಮನೇಲಿ ಗಂಜಿ ಬೇಯ್ಸಿಟ್ಟು
ಸ್ವಾಮಿ ಮೂಡೋಕೆ ಮುಂಚೆ
ನಿಮ್ಮ ಮನೇಗೆ ಹಾಜರಾಗಿ
ಮುಸ್ರೆ ತಿಕ್ಕುವ ಚೆನ್ನಿಯ ಮಾತು
ಈಗ ಬೇಡ ಬಿಡಿ||

ಬಡಪಾಯಿ ಜನಕ್ಕೆ ನೂರು ರೂಪಾಯಿ ಸಾಲ ಕೊಟ್ಟು
ವರ್ಷವೆಲ್ಲಾ ನಿತ್ಯವೂ ಒಂದು ರೂಪಾಯಿ
ಬಡ್ಡಿ ವಸೂಲು ಮಾಡೋ
ನಿಮ್ಮ ಚಾಣಾಕ್ಷ ಬುದ್ಧಿಯ ಬಗ್ಗೆ
ಬರೆಯುವುದಿಲ್ಲ, ಬಿಡಿ|

ಪೂರ್ವದಲ್ಲಿ ಹುಟ್ಟೋ ಸೂರ್ಯ
ಪಷ್ಚಿಮದಲ್ಲಿ ಅಪ್ಪಿ ತಪ್ಪಿ ಹುಟ್ಟಿದ್ರೂ
ನಿಮ್ಮಂತೋರು ಹಾಗೆಯೇ
ನಮ್ಮಂತೋರು ಹೀಗೆಯೇ
ಅವೆಲ್ಲಾ ಈಗ ಯಾಕೆ ಬಿಡಿ||

5 comments:

Harisha - ಹರೀಶ said...

ಅರ್ಥಗರ್ಭಿತವಾಗಿದೆ.. :-)

ಹರಿಹರಪುರ ಶ್ರೀಧರ್ said...

Thanks, harish



http://sampada.net/user/hariharapurasridhar/content

Unknown said...

ಸರ್, ಒಂದು ಸಣ್ಣ ಮುಗುಳ್ನಗೆ ಬಿಟ್ಟು ಇನ್ನೇನು ಕೊಟ್ರೂ ಕಡಿಮೆಯಾಗುತ್ತೆ.
ಆದ್ದರಿಂದ.. [:)]
ಮತ್ತೆ ನಮಸ್ತೆಗಳೊಂದಿಗೆ...

ಸತ್ಯ

ಹರಿಹರಪುರ ಶ್ರೀಧರ್ said...

Thanks.
Please be in touch with me.Link to
my articles in Sampada.net is
http://sampada.net/user/hariharapurasridhar/content
Hariharapurasridhar

Unknown said...

ಖಂಡಿತ ಶ್ರೀಧರ್ ರವರೆ..
ಥ್ಯಾಂಕ್ಸ್ ನಿಮಗೂ ಕೂಡಾ..
ಸಾಧ್ಯವಾದಾಗಲೆಲ್ಲ ಭೇಟಿ ನೀಡುವೆ.

ಹಾಗೆ ನಿಮ್ಮಂತವರ ಅನಿಸಿಕೆ ನನ್ನಂಥ ಹೊಸಬರಿಗೆ ತುಂಬಾ ಹೆಚ್ಚಿನ ಉಪಯೋಗಕಾರಿ ಅನ್ನೋದು ನಿಮಗೂ ಗೊತ್ತಿರೋದೆ ಆಗಿರೋದ್ರಿಂದ ದಯವಿಟ್ಟೂ ಇಲ್ಲಿಗೂ ಒಮ್ಮೆ ಭೇಟಿ ನೀಡಿ..
http://sathyathetruthwithus-kannada.blogspot.com/
ನಿಮ್ಮ ಅನಿಸಿಕೆ ತಿಳಿಸಿ..
ಅದೇ ಲೇಖನ "ಸಂಪದ"ದಲ್ಲಿ ಈ ವಿಳಾಸದಲ್ಲಿ ಇದೆ..
http://sampada.net/blog/smsathyacharana
Wordpress.com ಭೇಟಿ ಕೊಡುವವರಾದರೆ.. ಅದರ ಲಿಂಕ್ ಈ ಕೆಳಗಿನಂತೆ.. ಎಲ್ಲೆಡೆಯೂ ಒಂದೇ ಲೇಖನ.. :)
https://sathyathetruthwithuskannada.wordpress.com/wp-admin/
ನಿಮ್ಮ ಭೇಟಿ ಅಮೂಲ್ಯ... ನಿಮ್ಮ ಅನಿಸಿಕೆ ಬಹು ಅವಶ್ಯ..

ನಿಮ್ಮೊಲವಿನ..
ಸತ್ಯ.