Sunday, December 21, 2008

ತೊಟ್ಟಿಮನೆ

ತೊಟ್ಟಿಮನೆ

ಊರಗೌಡರ
ತೊಟ್ಟಿಮನೆಯಲಿ
ಇದ್ದ ಜನಗಳು ನೂರು|
ರಾಜಠೀವಿಯಲಿ
ಗೌಡರು ಹೊರಟರೆ
ನಡುಗುತ್ತಿತ್ತು ಸೂರು||

ಒಂದು ಹೊತ್ತಿಗೆ
ನೂರು ಜನಗಳ
ಊಟವು ಒಮ್ಮೆಲೆ ನಡೆದಿತ್ತು|
ಒಟ್ಟಿಗೆ ಕುಣಿಯುತ
ಒಟ್ಟಿಗೆ ಮಲಗುತ
ಮಕ್ಕಳ ಕಾಲವು ಕಳೆದಿತ್ತು||

ಕೆಲಸದ ಹಂಚಿಕೆ ಯಾಗಿತ್ತು
ಮನೆಯಲಿ ಕಿಲಕಿಲ ನಗುವಿತ್ತು
ಗೌಡರ ಬಂಡಿಯು ಸಾಗಿತ್ತು|
ಅಜ್ಜಿಯ ತೊಡೆಯಲಿ
ಬೆಚ್ಚಗೆ ಮಕ್ಕಳು
ಮಲಗುತ ಕಾಲವು ಕಲೆದಿತ್ತು||

ಆಡುವ ಕಿಟ್ಟಿಯ
ನೋಡುತ ಗೌಡರು
ಗೌಡತಿ ಕಿವಿಯಲಿ ಕೇಳಿದರು|
ತುಂಟಾತದ ನಗುವಿನ
ಚಂದದ ಹುಡುಗ
ಯಾರ ಮನೆಯ ಮಗುವೆಂದು||

ಗೌಡತಿ ಗೌಡರ
ದುರುಗುಟ್ಟುತ ನೋಡಿ
ಪಿಸುಗುಟ್ಟುತ ಗೌಡರ ಕಿವಿಯೊಳಗೆ|
ಮಗ ಗೋಪಾಲನ
ಮುದ್ದಿನ ಮೂರನೆ
ಮಗನೇ ಅಲ್ಲವೇ ಇವನೆಂದು||

ಸಂಜೆಯ ಕಾಲದಿ
ಜಗತಿಯ ಮೇಲೆ
ಶಿಶುವಿಹಾರವೇ ನಡೆದಿತ್ತು|
ಮಕ್ಕಳ ಕುಣಿತವ
ಹಿರಿಯರು ನೋಡುತ
ನೋಡುತ ದಿನವೇ ಕಳೆದಿತ್ತು||

ಕಾಲದ ಕಣ್ಣೇ ಬಿದ್ದಿತ್ತು
ಕಂಬ ಕಂಬವೇ ಕುಸಿದಿತ್ತು
ತೊಟ್ಟಿಯ ಮನೆಯು ಒಡೆದಿತ್ತು
ಗೌಡರ ಕಥೆಯು ಮುಗಿದಿತ್ತು||

2 comments:

Anonymous said...

ಚೆನ್ನಾಗಿದೆ.

ಹದುಳವಿರಲಿ,
ನಲುಮೆ,
ಬರತ್
http://ybhava.blogspot.com

Bharath said...

"...ತುಂಟಾತದ ನಗುವಿನ
ಚಂದದ ಹುಡುಗ.."

ಅದು 'ತುಂಟಾಟ' ಆಗಬೇಕಿತ್ತು ಅಲ್ವೆ?

ಕಬ್ಬ ಚೆನ್ನಾಗಿದೆ,

ನಲುಮೆಯಿಂದ,
ಬರತ್
http://ybhava.blogspot.com