ನಮ್ಮೂರ ಒಂದು ಚಿಕ್ಕ ಪರಿಚಯ:ಹಾಸನ ಜಿಲ್ಲೆಯಲ್ಲಿ ಹೊಳೆನರಸೀಪುರ ತಾಲ್ಲೂಕಿನಲ್ಲಿ ನಮ್ಮೂರು ಹರಿಹರಪುರ ವಿದೆ. ವಿಜಯನಗರ ಸಾಮ್ರಾಜ್ಯದಲ್ಲಿ ಹರಿಹರಮಹಾರಾಜನಿಂದ ಬ್ರಾಹ್ಮಣರಿಗೆ ದಾನವಾಗಿ ಬಂದ ಈ ಅಗ್ರಹಾರದ ಮುಂಚಿನ ಹೆಸರು " ತವನಿಧಿ" . ಊರಿನ ಶಾಸನದ ಬಗ್ಗೆ ಮುಂದೊಮ್ಮೆ ನೋಡೋಣ.ಸಧ್ಯಕ್ಕೆ ನಮ್ಮೂರಿನ ಗ್ರಾಮದೇವತೆ " ಉಡಸಲಮ್ಮ-ದುರ್ಗಾಪರಮೇಶ್ವರಿ " ದೇವತೆ ಬಗ್ಗೆ ಎರಡು ಮಾತು. ನಮ್ಮೂರಿಗೆ ಸೇರಿದಂತೆ ಏಳು ಹಳ್ಳಿಗಳಿವೆ. ನಮ್ಮೂರು ಒಂದು ಪಂಚಾಯ್ತಿ ಕೇಂದ್ರ. ಈ ಏಳು ಹಳ್ಳಿಗಳಲ್ಲೂ ಯಾರು ಏನೊಂದೂ ಶುಭಕಾರ್ಯ ಮಾಡಬೇಕಾದರೂ ದೇವಿಯ ಅಪ್ಪಣೆ ಪಡೆದು ಮಾಡುವ ಪದ್ದತಿ. ದೇವಿಯನ್ನು ನಂಬಿದ ನಮ್ಮ ಬದುಕು ನಿರಾತಂಕ. ಈ ದೇವಿಯ ಮಹಿಮೆ ಎಷ್ಟಿದೆ ಎಂದರೆ ದೂರದ ಮೈಸೂರು, ಬೆಂಗಳೂರು, ಅಷ್ಟೇಕೆ ಹೊರರಾಜ್ಯದಲ್ಲಿ ನೆಲಸಿರುವ ನಮ್ಮೂರ ಜನರೂ ಕೂಡ ಈ ದೆವಿಯನ್ನೇ ನಂಬಿ ಬದುಕು ಸಾಗಿಸಿದ್ದಾರೆ. ನಿತ್ಯವೂ ಒಂದಿಲ್ಲೊಂದು ಹೊರ ಊರುಗಳಿಂದ ಭಕ್ತರು ಬಂದು ದೇವಿಯ ಸೇವೆ ಮಾಡಿಸಿಕೊಂಡು ಹೋಗುತ್ತಾರೆ. ಅಪಾರ ಶಕ್ತಿಯುಳ್ಳ ತಾಯಿ ಉಡುಸಲಮ್ಮನ ಕೃಪೆಗಾಗಿ ಹಾತೊರೆಯುತ್ತಾರೆ. ನಿತ್ಯ ಅಭಿಷೇಕ ,ಅರ್ಚನೆ, ಎಲ್ಲವನ್ನೂ ಅರ್ಚಕರಾದ ಶ್ರೀ ಕೃಷ್ಣಮೂರ್ತಿ ಗಳು ಭಕ್ತರ ಮನಸ್ಸಿಗೆ ನೆಮ್ಮದಿ ಸಿಗುವಂತೆ ನಡೆಸಿಕೊಂಡು ಹೋಗುತ್ತಾರೆ.
ಈ ಮಾಲಿಕೆಯಲ್ಲಿ ನಮ್ಮೂರಿನ ಹಾಗೂ ದೇವಿಯ ಪರಿಚಯ ಆಗಿಂದಾಗ್ಗೆ ಬರೆಯುತ್ತಾ ಹೋಗುವೆ. ಪ್ರತಿ ವರ್ಷ ದೇವಿಯ ಜಾತ್ರೆಯು ಸಾಮಾನ್ಯವಾಗಿ ಯುಗಾದಿ ಹಬ್ಬದ ಹಿಂದಿನ ಶುಕ್ರವಾರ- ಶನಿವಾರ ನಡೆಯುತ್ತೆ. ಎರಡು ವರ್ಷಗಳಿಗೊಮ್ಮೆ ಸಿಡಿಜಾತ್ರೆ ನಡೆಯುತ್ತೆ. ಆ ಬಗ್ಗೆ ಮುಂದಿನ ಬರಹಗಳನ್ನು ನಿರೇಕ್ಷಿಸಬಹುದಾಗಿದೆ. ದೇವಿಯ ಉತ್ಸವಮೂರ್ತಿ, ಹಾಗೂ ಕೆನ್ಡಕೊನ್ಡ ದ ಚಿತ್ರಗಳು ಇದೇ ಬ್ಲಾಗಿನಲ್ಲಿವೆ. ಇನ್ನೂ ಅನೇಕ ಚಿತ್ರಗಳನ್ನು ಮುಂದೆ ಬ್ಲಾಗಿನಲ್ಲಿ ಪ್ರಕಟಿಸುವೆ.ದೇವಿಯ ದರ್ಶನ ಮಾಡಬಯಸುವವರಿಗೆ ಹಾಸನ ಬೆಂಗಳೂರು ಮತ್ತು ಹೊಳೆನರಸೀಪುರಗಳಿಂದ ಬಸ್ಸುಗಳಿವೆ. ದರ್ಶನ ಮಾಹಿತಿಗಾಗಿ ಅರ್ಚಕರ ಮೊಬೈಲ್ ನಂಬರ್: 92429337217 ಅಥವಾ ನನ್ನ ನಂಬರ್ ನಿಂದಲೂ ಮಾಹಿತಿ ಪಡೆಯಬಹುದು. ನನ್ನ ನಂಬರ್ : 9448048668

2 comments:
ಶ್ರೀಧರ್ ರವರೇ, ನಿಮ್ಮ ಬ್ಲಾಗ್ ಗೆ ಭೇಟಿ ನೀಡಿದ್ದೇನೆ. ಅದ್ಭುತವಾದ ಉದ್ದೇಶ, ಅದ್ಭುತವಾದ ವಿನ್ಯಾಸ, ಉನ್ನತ ಚಿ೦ತನೆಗಳನ್ನೊಳಗೊ೦ಡ ನಿಮ್ಮ ಬ್ಲಾಗ್ ನನ್ನ ಮನ ಸೆಳೆದಿದೆ. ವಿರಾಮವಿದ್ದಾಗ ಪೂರ್ತಿ ಓದುತ್ತೇನೆ.
ತಮ್ಮ ಪ್ರೀತಿಯ
ಡಾ| ಜ್ಞಾನದೇವ್ ಮೊಳಕಾಲ್ಮುರು
ಡಾ| ಜ್ಞಾನದೇವ್ ಮೊಳಕಾಲ್ಮುರು
ಧನ್ಯವಾದಗಳು,
ಸಂಪದದಲ್ಲಿ ಒಂದಿಷ್ಟು ಪ್ರತಿಕ್ರಿಯೆ ಬರೆಯುವುದು ಬಿಟ್ಟರೆ ನನ್ನ ಬ್ಲಾಗಿಗೆ ಸಮಯ ಕೊಡಲು ಸಾಧ್ಯವಾಗುತ್ತಿಲ್ಲ.
Post a Comment