ನನ್ನ ಈ ಬ್ಲಾಗಿನಲ್ಲಿ ಒಂದಿಷ್ಟು ಸದ್ವಿಚಾರಗಳ ಚಿಂತನ-ಮಂಥನ ನಡೆಯಬೇಕೆನ್ಬುದು ನನ್ನ ಇಚ್ಛೆ. ನಮ್ಮ ದೇಶದಲ್ಲಿ ಅನೇಕ ಮಹಾಮಹಿಮರು, ಅವದೂತರು, ಸಂತರು, ಜನ್ಮತಾಳಿ ನಮ್ಮ ಭವ್ಯ ಪರಂಪರೆಯನ್ನು ಇನ್ನಷ್ಟು ಮತ್ತಷ್ಟು ಅರಳಿಸಿದ್ದಾರೆ. ಅವರುಗಳ ವಿಚಾರ ಓದಿದಾಗಲೆಲ್ಲಾ ನಿಮ್ಮೊಡನೆ ಹನ್ಚಿಕೊಳ್ಳುವಾಸೆ. ಹಾಗೆಯೇ ನಮ್ಮೂರಿನ ದೇವತೆ ದುರ್ಗಾಪರಮೇಶ್ವರಿ-ಉದುಸಲಮ್ಮ ಮಹಾಶಕ್ತಿ ದೇವತೆ. ದೇವಿಯ ಬಗ್ಗೆ ನನಗೆ ತಿಳಿದ ವಿಚಾರ ಹನ್ಚಿಕೊಳ್ಳುತ್ತಾ ಹೋಗಬೇಕೆನ್ನುವಾಸೆ. ಅಂತೂ ಭಗವಂತನ ಚಿಂತನೆ, ಸದ್ವಿಚಾರಗಳ ಚಿಂತನೆ ನನ್ನ ಉದ್ದೇಶ. ಇಂದಿನ ಕಾಲಘಟ್ಟಕ್ಕೆ ನಮ್ಮ ಪರಂಪರೆಯನ್ನು ನೆನಪು ಮಾಡಿಕೊಂಡಾಗ ಮಾತ್ರ ನೆಮ್ಮದಿ ದೊರಕೀತು. ಇದೇ ಈ ನನ್ನ" ನೆಮ್ಮದಿ ಬ್ಲಾಗಿನ "ಉದ್ದೇಶ. ನನ್ನ ಜೊತೆಗೆ ಚಿಂತನ ಮಂಥನಕ್ಕೆ ಸದಾ ಸ್ವಾಗತವಿದೆ. ಹರಿಹರಪುರಶ್ರೀಧರ್
ಚೇತನ
ಗುರುವಿನ ಶ್ರೀರಕ್ಷೆ : ಗುರುವನ್ನು ಬಲವಾಗಿ ನಂಬಿದರೆ ಶಿಷ್ಯನನ್ನು ಗುರು ಯಾವರೀತಿ ರಕ್ಷಿಸಬಲ್ಲಾ ,ಎಂಬುದಕ್ಕೆ ಶ್ರೀ ರಾಮಕೃಷ್ಣರ ಹಾಗೂ ವಿವೇಕಾನ೦ದರ ಜೀವನದಲ್ಲಿನ ಹಲವಾರು ಘಟನೆಗಳು ನಮಗೆ ಭರವಸೆಯನ್ನು ಮೊಡಿಸುತ್ತವೆ. ವಿವೇಕಾನಂದರು ಸನ್ಯಾಸ ಸ್ವೀಕರಿಸಿದ ಹೊಸದರಲ್ಲಿ ತೀರ್ಥಯಾತ್ರೆ ಮಾಡುತ್ತಾ ಅಲಹಾಬಾದಿಗೆ ಬರುತ್ತಾರೆ. ಫಾಜೀಪುರದಲ್ಲಿದ್ದ ಪವಾಹಾರಿಬಾಬರ ಬಗ್ಗೆ ತಿಳಿದಿದ್ದ ವಿವೇಕಾನನ್ದರಿಗೆ ಅವರನ್ನು ನೋಡಬೇಕೆಂಬ ಕುತೂಹಲ. ನದೀ ತೀರದಲ್ಲಿ ಭೂಮಿಯನ್ನು ಅಗೆದು ಗುಹೆಯೊನ್ದನ್ನು ಮಾಡಿಕೊಂಡು ಅದರಲ್ಲಿ ಬಾಬಾ ವಾಸವಾಗಿದ್ದರು. ಕೇವಲ ಒಂದಿಷ್ಟು ಬೇವಿನಸೊಪ್ಪು ಹಾಗೂ ಒಂದು ಹಿಡಿ ಮೆಣಸನ್ನು ತಿಂದು ಜೀವಿಸುತ್ತಿದ್ದರಿಂದ ಬಾಬಾರನ್ನು "ಪವಾಹಾರಿಬಾಬ " ಎಂದು ಜನರು ಕರೆಯುತ್ತಿದ್ದರು. [ಅಂದರೆ ಕೇವಲ ಗಾಳಿಯಿಂದ ಬದುಕುವ ಸಾದು ]ಒಮ್ಮೊಮ್ಮೆ ಬಾಬಾಐದಾರು ವಾರಗಳ ಕಾಲ ಗುಹೆಯಲ್ಲಿ ಧ್ಯಾನದಲ್ಲಿರುತ್ತಿದ್ದರು. ಗುಹೆಯಿಂದ ಹೊರಬರುತ್ತಲೇ ಇರಲಿಲ್ಲಿ. ಅನೇಕ ವೇಳೆ ಬಾಬಾ ಬದುಕಿಲ್ಲವೆಂದು ಜನರು ಭಾವಿಸಿದ್ದೂ ಉಂಟು. ವಿವೇಕಾನಂದರು ಬಹುದಿನಗಳು ಕಾಯ್ದು ಒಂದು ದಿನ ಬಾಬಾರ ದರ್ಶನ ಪಡೆದರು..............[ಮುಂದುವರೆಯುವುದು]
ನನ್ನ ಕವನಗಳು
ಹುಚ್ಚರ ಸಂತೆ:
ಏನಾದರೇನಂತೆ ಇದು ಒಂದು ಸಂತೆ ಚಿಂತೆ ಇಲ್ಲದೆ ವ್ಯಾಪಾರ ಇಲ್ಲಿ ನಡೆದಿದೆಯ೦ತೆ ಸತ್ಯಕ್ಕೆ ಸ೦ತೆಯಲಿ ಬೆಲೆಇಲ್ಲವಂತೆ ಸುಳ್ಳನ್ನೇ ಹೇಳಿದವ ಶ್ರೀಮಂತ ನಂತೆ!!
ಪ್ರೀತಿ ಪ್ರೇಮಗಳಿಲ್ಲಿ ವ್ಯಾಪಾರವಂತೆ ನೀತಿ ನ್ಯಾಯಗಳ ಹೆಸರಿಲ್ಲವಂತೆ ಬಣ್ಣವಿಲ್ಲದೇ ನಾಟಕ ಆಡುತಿಹರಂತೆ ನೋಡುವಾ ನಾವೆಲ್ಲ ಕುರಿಮಂದೆಯಂತೆ
ಜಗವೊ೦ದು , ನೂರಾರು ಜಗದ್ಗುರುಗಳ೦ತೆ ಉಳ್ಳವರು ದರುಶನವ ಮಾಡುವರಂತೆ ಹಲವರಿಗೆ ಹಗಲಿರುಳು ಹೊಟ್ಟೆಗಿಲ್ಲದ ಚಿಂತೆ ಧರ್ಮ ವೆಂಬುದು ಇಲ್ಲಿ ವ್ಯಾಪಾರವಂತೆ
ಹುಚ್ಚು ಕುದುರೆಯನೇರಿ ಹೊರಟಿರುವರಂತೆ ಸೇರುವುದು ಎಲ್ಲಿಗೆ ಗೊತ್ತಿಲ್ಲವಂತೆ ನಾಮುಂದು ,ತಾಮುಂದು ನೂಕಾಟವಂತೆ ಅಹುದಹುದು ಇದು ಒಂದು ಹುಚ್ಚರಾ ಸಂತೆ